Posts

Showing posts from 2021

ಸಮಸ್ಯೆ

                                                 ತಾತನಿಗೆ ಮಹಾರಾಜರ ಖಜಾನೆಯ ಬಗ್ಗೆ ಬಹಳ ಮಾಹಿತಿ ಇತ್ತಂತೆ . ಮಹಾರಾಜರನ್ನು ಬಹಳ ಹತ್ತಿರದಿಂದ ಬಲ್ಲವರವರು . ರಾಜರ ವಿತ್ತ ವ್ಯವಹಾರಗಳನ್ನು ಹಲವು ವರ್ಷಗಳಿಂದ ನೋಡಿಕೊಂಡಿದ್ದವರವರು . ಬ್ರಿಟಿಷರಿಗೆ ಎಷ್ಟೇ ಸುಂಕ ನೀಡಿದರೂ ಮಹಾರಾಜರ ಆಸ್ತಿ ಮತ್ತು ವ್ಯವಹಾರದಲ್ಲಿ ಕಿಂಚಿತ್ತೂ ಕುಗ್ಗಿರಲಿಲ್ಲವಂತೆ . ಅದು ಹೇಗೆ ಸಂಭಾಳಿಸುತ್ತಿದ್ದರು ಎಂದು ರಾಜನಿಗೆ ಮತ್ತು ತಾತಾನಿಗೆ ಮಾತ್ರ ತಿಳಿದಿತ್ತೆಂದು ಹೇಳುತ್ತಾರೆ . ಈ ಕಾಗದದ ಚಿತ್ರಗಳು ಅಂಥದೇನನ್ನು ಹೇಳಲಾರದಲ್ಲವೇ ? ರಾಜ ವಂಶಸ್ಥರು ಹಿಂದಿನ ವಾರ ಮನೆಗೆ ಬಂದು ಹೋಗಿದ್ದರು . ಏನಾದರು ಸುಳಿವು ಸಿಕ್ಕರೆ ನಮ್ಮನ್ನು ಮರೆಯದಿರಿ ಎಂದು ಹೇಳಿ ಹೋಗಿದ್ದರು . ನಾನು ಕಾಗದದ ಫೋಟೋ ಕಾಪಿ ನೀಡಲು ನಿರಾಕರಿಸಿದೆ . ಅದರಲ್ಲಿ ಅಂಥದ್ದು ಏನು ಇಲ್ಲ , ಮನೆತನದ ಚಿತ್ರಗವು ಎಂದು ತಿಳಿಸಿದೆ , ಈಗ ಎಂತಾ ರಾಜ ಮನೆತನ ? ಅರಮನೆಯ ನಿಶಾನೆಗಳ್ಳನ್ನು ರೆಸಾರ್ಟ್ ಮಾಡಿ ಬದುಕುತ್ತಿರುವವರಷ್ಟೇ . ರಾಜ ವಂಶಸ್ತರೆಂದು ಅವರೇ ಹೇಳಿಕೊಂಡರೂ ಕೇಳುವವರಿಲ್ಲ . ನನಗೆ ಸಿಕ್ಕ ಕಾಗದ ಮತ್ತು ಅದರ ಚಿತ್ರಗಳು ಊರೆಲ್ಲ ಸುದ್ದಿಯಾಗಿದೆ . ಕೆಲಸಕ್ಕೆ ಬರುವ ಸತೀಶನೂ ಕೇಳಿ ಆಯಿತು . " ಅಣ್ಣ , ತೋಟದ ಮದ್ಯೆ ನನಗೆ ಯಾವಾಗಲು ಒಂದು ಆಯಸಕಾಂತದ ಶಕ್ತಿ ಎಳೆದ