Posts

Showing posts from 2012

ಹುಡುಕಾಟ

                    ಕೆಲವು ದಿನಗಳಿಂದ ಬರವಣಿಗೆಯೇ ನಿಂತು ಹೋಗಿತ್ತು . ಬರೆಯಲಿಕ್ಕೆ ಏನೂ ಹೊಳೆಯುತ್ತಲೇ ಇರಲಿಲ್ಲ . ಮಹತ್ವಾಕಾಂಕ್ಷೆಯ ಬ್ಲಾಗ್ ಧೂಳು ಹಿಡಿದಿತ್ತು .   ಅಕ್ಕ ಭಾ ವ ಬೇರೆ ಇತ್ತೀಚಿಗೆ ಏನೂ ಬರಿತಿಲ್ವೇನೂ , ಏನೂ ಸುದ್ದಿ ಇಲ್ಲ ಅಂತಿದ್ದರು . ರೂಮೇಟ್ ಗಳೆಲ್ಲಾ ಬಚಾವ್ ಇವನು ತಲೆ ತಿನ್ನೋದು ತಪ್ಪಿತು ಅಂದುಕೊಂಡಿದ್ದರು .   ಪದೇ ಪದೇ EXAM ಬೇರೆ ಒಂದೆರಡು ಗಂಟೆ ಸುಮ್ಮನೆ ಕೂತು ಯೋಚನೆ ಮಾಡೋಕೆ ಬಿಡುತ್ತಿರಲಿಲ್ಲ . ಇವತ್ತು ಏನಾದ್ರು ಬರಿಲೇ ಬೇಕು ಅಂತ ವಿಷಯ ಹುಡುಕಿಕೊಂಡು ಹೊರಟೆ . ಖಾಲಿ ಮನಸು ಖಾಲಿ ಹಾಳೆ ಎರಡೂ ಜೊತೆಗಿತ್ತು . ಹಳೇ ಪೆನ್ನು ಕಳೆದು ಹೋಯ್ತು . ಹೊಸ ಪೆನ್ನು ““ ನೋಡೋಣ ಇವನು ಏನು ಬರಿತಾನೆ ’”” ಅಂತ ಜೇಬಲ್ಲಿ ಕುಳಿತ ಹಾಗಿತ್ತು . ರೂಮಿಂದ ಹೊರ ಬಂದು ಗೇಟ್ ತೆಗೆದು ಗಾಡಿ ತಿರುಗಿಸಿದೆ .   ಛೆ ಗಾಡಿಯಲ್ಲಿ ಹೋದ್ರೆ ಏನು ಸಿಗುತ್ತೆ , ಬ ರೀ ಚಳಿ ಗಾಳಿ ಅಷ್ಟೇ , ಅಂತ ಮತ್ತೆ ಲಾಕ್ ಹಾಕಿ ಗೇಟ್ ಮುಚ್ಚಿ ಕಾಲ್ನಡಿಗೆಯಲ್ಲೇ ಸಂಚಾರ , ವಿಷಯ ಶೋ ಧ ನೆ ಶುರುವಾಯ್ತು .   ದಾರಿಯಲ್ಲಿ ನಮ್ಮ ರೂಂ ಮಾಲಕರು ಗಿಡಗಳಿಗೆ ನೀರು ಹಾಕುತ್ತ ಇದ್ದರು . ಪಕ್ಕದಲ್ಲೇ ಒಂದು ಹಕ್ಕಿ ಹಾರಿತು . “” ಅರೇ ಸನ್ ಬರ್ಡ್ . ಇದರ ಗಂಡು ಪ್ರಭೇದ ಎಲ್ಲಿ . ಅದು ನೋಡ್ಲಿಕ್ಕೆ ಸುಪ್ಪರಾಗಿರುತ್ತೆ . ನೀಲಿ