Posts

Showing posts from 2011

ಅಸ್ಥಿತ್ವ

“ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೇ “                            ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಆಚಾರ್ಯರ ಮಂತ್ರ ಪಟನೆಯಾಗುತ್ತಿರಬೇಕಾದರೆ ಅವನ ಮನಸ್ಸೆಲ್ಲಾ ಜಿ.ಎಸ್.ಶಿವರುದ್ರಪ್ಪನವರ ಇದೇ ಹಾಡು ಗುನುಗುಡುತ್ತಿತ್ತು. ದೇವಸ್ಥಾನದ ಸುತ್ತ ೫೦ ಮೀಟರ್ ವರೆಗೂ ಗಂಟೆಯ ಸದ್ದು ಜೇ೦ಕರಿಸುತ್ತಾ ಯಂತ್ರಚಾಲಿತ ಡಮರುಗದ ಸದ್ದೂ ಸೇರಿ ಶಿವನೇ ವಿಶ್ವಸ್ವರೂಪ ಅವನ ಹೊರತು ಯಾರೂ ಇಲ್ಲ ಎಂಬಂತೆ ಹರಡಿತ್ತು. ವಾಹನಗಳ ಸದ್ದು, ಹಕ್ಕಿ ಪಕ್ಕಿ, ದನಕರುಗಳ ಕೂಗು, ಜನರ ಮಾತು ಕತೆ ಎಲ್ಲವೂ ಈ ಜೇ೦ಕಾರದ ಮುಂದೆ ನಿಶಭ್ದವಾದಂತೆ ಗೋಚರಿಸಿತ್ತು. ಆಚಾರ್ಯರ ಮಂತ್ರದ ಏರಿಳಿತ , ಪುಟ್ಟ ಪುಟ್ಟ ದೀಪಗಳು , ಹೂವಿನ  ಅಲಂಕಾರದಿಂದ ,ಶಿವನೇ ದರ್ಶನ ಕರುಣಿಸಲು ಬಂದಿಳಿದಂತೆ ದೇವಾಲಯದಲ್ಲಿ ಜನಸ್ತೋಮ ಭಕ್ತಿಭಾವದಿಂದ ಕೈ ಮುಗಿದು ನಿಂತಿದ್ದರು.  ಆದರೆ ಅವನು ಮಾತ್ರ ಮುಖದಲ್ಲಿ ಯಾವ ಭಕ್ತಿ ಭಾವನೆಯೂ ಇಲ್ಲದೆ , ಭಾವಹೀನನಾಗಿ ಒಂದೊಂದೇ ಆರತಿ ತಟ್ಟೆಯನ್ನು ಆಚಾರ್ಯರಿಗೆ ನೀಡುತಿದ್ದ. ಹಣೆಯಲ್ಲಿ ತಿಲಕವೂ ಇಲ್ಲ , ಕಾಟಾಚಾರಕ್ಕೆ ಪಂಚೆ ತೊಟ್ಟಿದ್ದ ಹಲವು ವರ್ಷಗಳಿಂದಲೂ ಉಪಕರ್ಮದ ಸಂಸ್ಕಾರವೇ ನಡೆಯದ ಜನಿವಾರ ಮೈಮೆಲಿತ್ತು ಪೂಜೆ ಮುಗಿದ ನಂತರ ಆರತಿಯನ್ನು ಜನರಿಗೆ ನೀಡತೊಡಗಿದ. ಕರ್ಪೂರದ ಬಿಸಿ ಆರತಿಯ ತುದಿಯನ್ನೂ ಸೇರಿತ್ತು. ಬಿಸಿಯ ಅರಿವೆ ಆಗಿಲ್ಲವೇನೋ ಎಂಬಂತೆ ಹಿಡಿದುಕೊಂಡಿದ್ದ