Posts

ಸಮಸ್ಯೆ

                                                 ತಾತನಿಗೆ ಮಹಾರಾಜರ ಖಜಾನೆಯ ಬಗ್ಗೆ ಬಹಳ ಮಾಹಿತಿ ಇತ್ತಂತೆ . ಮಹಾರಾಜರನ್ನು ಬಹಳ ಹತ್ತಿರದಿಂದ ಬಲ್ಲವರವರು . ರಾಜರ ವಿತ್ತ ವ್ಯವಹಾರಗಳನ್ನು ಹಲವು ವರ್ಷಗಳಿಂದ ನೋಡಿಕೊಂಡಿದ್ದವರವರು . ಬ್ರಿಟಿಷರಿಗೆ ಎಷ್ಟೇ ಸುಂಕ ನೀಡಿದರೂ ಮಹಾರಾಜರ ಆಸ್ತಿ ಮತ್ತು ವ್ಯವಹಾರದಲ್ಲಿ ಕಿಂಚಿತ್ತೂ ಕುಗ್ಗಿರಲಿಲ್ಲವಂತೆ . ಅದು ಹೇಗೆ ಸಂಭಾಳಿಸುತ್ತಿದ್ದರು ಎಂದು ರಾಜನಿಗೆ ಮತ್ತು ತಾತಾನಿಗೆ ಮಾತ್ರ ತಿಳಿದಿತ್ತೆಂದು ಹೇಳುತ್ತಾರೆ . ಈ ಕಾಗದದ ಚಿತ್ರಗಳು ಅಂಥದೇನನ್ನು ಹೇಳಲಾರದಲ್ಲವೇ ? ರಾಜ ವಂಶಸ್ಥರು ಹಿಂದಿನ ವಾರ ಮನೆಗೆ ಬಂದು ಹೋಗಿದ್ದರು . ಏನಾದರು ಸುಳಿವು ಸಿಕ್ಕರೆ ನಮ್ಮನ್ನು ಮರೆಯದಿರಿ ಎಂದು ಹೇಳಿ ಹೋಗಿದ್ದರು . ನಾನು ಕಾಗದದ ಫೋಟೋ ಕಾಪಿ ನೀಡಲು ನಿರಾಕರಿಸಿದೆ . ಅದರಲ್ಲಿ ಅಂಥದ್ದು ಏನು ಇಲ್ಲ , ಮನೆತನದ ಚಿತ್ರಗವು ಎಂದು ತಿಳಿಸಿದೆ , ಈಗ ಎಂತಾ ರಾಜ ಮನೆತನ ? ಅರಮನೆಯ ನಿಶಾನೆಗಳ್ಳನ್ನು ರೆಸಾರ್ಟ್ ಮಾಡಿ ಬದುಕುತ್ತಿ...

ಹುಡುಕಾಟ

                    ಕೆಲವು ದಿನಗಳಿಂದ ಬರವಣಿಗೆಯೇ ನಿಂತು ಹೋಗಿತ್ತು . ಬರೆಯಲಿಕ್ಕೆ ಏನೂ ಹೊಳೆಯುತ್ತಲೇ ಇರಲಿಲ್ಲ . ಮಹತ್ವಾಕಾಂಕ್ಷೆಯ ಬ್ಲಾಗ್ ಧೂಳು ಹಿಡಿದಿತ್ತು .   ಅಕ್ಕ ಭಾ ವ ಬೇರೆ ಇತ್ತೀಚಿಗೆ ಏನೂ ಬರಿತಿಲ್ವೇನೂ , ಏನೂ ಸುದ್ದಿ ಇಲ್ಲ ಅಂತಿದ್ದರು . ರೂಮೇಟ್ ಗಳೆಲ್ಲಾ ಬಚಾವ್ ಇವನು ತಲೆ ತಿನ್ನೋದು ತಪ್ಪಿತು ಅಂದುಕೊಂಡಿದ್ದರು .   ಪದೇ ಪದೇ EXAM ಬೇರೆ ಒಂದೆರಡು ಗಂಟೆ ಸುಮ್ಮನೆ ಕೂತು ಯೋಚನೆ ಮಾಡೋಕೆ ಬಿಡುತ್ತಿರಲಿಲ್ಲ . ಇವತ್ತು ಏನಾದ್ರು ಬರಿಲೇ ಬೇಕು ಅಂತ ವಿಷಯ ಹುಡುಕಿಕೊಂಡು ಹೊರಟೆ . ಖಾಲಿ ಮನಸು ಖಾಲಿ ಹಾಳೆ ಎರಡೂ ಜೊತೆಗಿತ್ತು . ಹಳೇ ಪೆನ್ನು ಕಳೆದು ಹೋಯ್ತು . ಹೊಸ ಪೆನ್ನು ““ ನೋಡೋಣ ಇವನು ಏನು ಬರಿತಾನೆ ’”” ಅಂತ ಜೇಬಲ್ಲಿ ಕುಳಿತ ಹಾಗಿತ್ತು . ರೂಮಿಂದ ಹೊರ ಬಂದು ಗೇಟ್ ತೆಗೆದು ಗಾಡಿ ತಿರುಗಿಸಿದೆ .   ಛೆ ಗಾಡಿಯಲ್ಲಿ ಹೋದ್ರೆ ಏನು ಸಿಗುತ್ತೆ , ಬ ರೀ ಚಳಿ ಗಾಳಿ ಅಷ್ಟೇ , ಅಂತ ಮತ್ತೆ ಲಾಕ್ ಹಾಕಿ ಗೇಟ್ ಮುಚ್ಚಿ ಕಾಲ್ನಡಿಗೆಯಲ್ಲೇ ಸಂಚಾರ , ವಿಷಯ ಶೋ ಧ ನೆ ಶುರುವಾಯ್ತು .   ದಾರಿಯಲ್ಲಿ ನಮ್ಮ ರೂಂ ಮಾಲಕರು ಗಿಡಗಳಿಗೆ ನೀರು ಹಾಕುತ್ತ ಇದ್ದರು . ಪಕ್ಕದಲ...